Thursday, June 4, 2009

ಬಾಲ್ಯ

ಮತ್ತೆ ಮರುಕಳಿಸುತ್ತಿದೆ....
ಎನ್ನ ಬಾಲ್ಯ, ಮಗನಲ್ಲಿ....

ಅವನ ಆಟ ಪಾಠಗಳಲ್ಲೆಲ್ಲಾ...
ನಾನು ಸಮ ಭಾಗಿ ...

ಪ್ರತಿಸಲ ಗೆಲ್ಲ ಬೇಕೆಂದು .,
ಅವನ ಹಠ . . .

ನನಗೋ., ಕಲಿಸಲಿಷ್ಟ ...
ಸೋಲಿನ ಪಾಠ ...

ಹಳೆ ಪಳೆಯುಳೆಕೆಗಲೆಲ್ಲಾ .,
ಅಂದೆನ್ನ ಆಟಿಕೆಗಳು ...

ಇವನಿಗೋ ಎಲ್ಲವೂ...
ಹೊಚ್ಚ ಹೊಸದು...

ಒಂದೇ ದಿನಕ್ಕೆಲ್ಲಾ ...
ಅವು ಪಳೆಯುಳಿಕೆಗಳು ....

ಕಳೆದು ಕೊಂಡ ನೋವು .,
ಅವನಲ್ಲಿಲ್ಲವೇ ಇಲ್ಲ !!!

ಮತ್ತೆ ಹೊಸದೊಂದರ .,
ನಿರೀಕ್ಷೆಯ ಆನಂದದಲ್ಲಿ ...

ನನಗೋ ಕಳೆದು ಕೊಂಡ .,
ನೋವಿನ್ನೂ ಮಾಸಿಲ್ಲ ಮನದಲ್ಲಿ ...

ಬದುಕಿನ ಪಾಠ .....
ಅವನಿಗೆ ಕಲಿಸಲೇ...?
ಅವನಿಂದ ಕಲಿಯಲೇ...?

7 comments:

Ittigecement said...

ಕ್ರಪಾರವರೆ....

ಮಗುವಿನಿಂದ ನಾವು ಕಲಿಯ ಬೇಕು...

ಬಹಳ ಸುಂದರವಾಗಿ...
ಸರಳವಾಗಿ ಬರೆದಿದ್ದೀರಿ....

ಕೊನೆಯ ಸಾಲುಗಳು ಮನತಟ್ಟುತ್ತವೆ....

ಮಗುವಿನ ಹಾಗಿರಬೇಕು ನಮ್ಮ ಮನಸು...
ಎಷ್ಟೊಂದು ಸೊಗಸು ಅಲ್ಲವಾ...?

ಕೃಪಾ said...

ನಮಸ್ತೆ ಪ್ರಕಾಶ್ ಅವರೇ....

ನಾವು ಮಗುವಿನಂತೆ ಇರುವುದಿರಲಿ......

ನೀವೇ ಹೇಳಿದಂತೆ, ಮಗುವನ್ನು ಅದರ ಮುಗ್ಧತನದಿಂದ ಆಧುನಿಕತೆ ಎಡೆಗೆ ಎಳೆದು ಕೊಂಡು ಬರ್ತೀವಿ.ಶಿಷ್ಟಾಚಾರ ಕಲಿಸುತ್ತೀವಿ.

ಆದರು ಮಗುವಿನೊಡನೆ ಆಡುವಾಗ ನಾವು ಮಗುವಿನಂತಾಗಿ ಬಿಡುತ್ತೀವಿ. ಅವರ ವಿಚಾರಧಾರೆ ಒಮ್ಮೊಮ್ಮೆ ದಂಗು ಬಡಿಸುವಂತೆ ಇರುತ್ತೆ. ಒಮ್ಮೊಮ್ಮೆ ತಡೆಯಲಾಗದ ನಗು ಬಂದು ಬಿಡುತ್ತೆ ಹಾಗೇನೇ ಸಿಟ್ಟು ಕೂಡ ......

ಶಿವಪ್ರಕಾಶ್ said...

ತುಂಬಾ ಚನ್ನಾಗಿದೆ...
ನೀವು ಕವನದಲ್ಲಿ ಹೇಳಿದ ಹಾಗೆ,
ನನ್ನ ಚಿಕ್ಕಮ್ಮಳ ಪುಟ್ಟ ಮಗಳಿಗೆ ಪಾಠ ಹೇಳಲು ಹೋಗಿ, ನಾನೇ ಪಾಠ ಕಲಿತಿದ್ದೇನೆ..

Umesh Balikai said...

ಕೃಪಾ,

ಅರ್ಥಾವತ್ತಾದ ಕವನ. ನಮ್ಮಿಂದ ಮಕ್ಕಳು ಕಲಿಯಲು ಸಾಕಷ್ಟು ಸಮಯವಿದೆ.. ಅವರು ಕಲಿಯದಿದ್ದರೂ ಬದುಕು ಕಲಿಸುತ್ತೆ.. ಆದರೆ ನಾವು ಅವರಿಂದ ಕಲಿಯಬೇಕಿರೋದು ಬಹಳಷ್ಟಿದೆ.. ಅಲ್ಲವೇ?

ಕೃಪಾ said...

ನಮಸ್ತೆ ಶಿವೂ..,

ಮಕ್ಕಳೇ ಹಾಗಲ್ವ..?" ಹಾಗೆ ಮಾಡಬೇಡಪ್ಪ" ಎಂದರೆ "ಮತ್ತೆ ನೀ ಮಾಡ್ತೀಯಾ? " ಎನ್ನುತ್ತಾನೆ. ಅವನಿಗಾಗಿ ನಾನೂ ಬದಲಾಗ ಬೇಕು.

ಯಾಕೆ ಶಿವೂ ಸ್ನೇಹ ಜನ್ಮದಲ್ಲಿ ಸಿಕ್ಕೊಲ್ಲ? ಪ್ರೀತಿಗೆ "ಪಟಾಯಿಸೋದು" ಎಂದೆಲ್ಲ ಹೇಳಬೇಡಿ . ಪ್ರಾಮಾಣಿಕವಾಗಿ ಪ್ರಯತ್ನಿಸಿ ಒಮ್ಮೆ . ಹೇಳದೆ ಮನದಲ್ಲಿ ಇಟ್ಟರೆ ತಿಳಿಯೋದಾದರು ಹೇಗೆ?

"ಅಣ್ಣಾವ್ರು" ಹೇಳಿಲ್ಲವೇ "ಆಗದು ಎಂದು .... ಕೈಲಾಗದು ಎಂದು .........."

ಕೃಪಾ said...

ನಿಜ ಉಮೇಶ್,

ನೀವು ಹೇಳೋದು ಸತ್ಯ .....

ನನ್ನ ಮಗನ ಅಂಗನವಾಡಿಗೆ ಕಳುಹಿಸ್ತ್ತಾ ಇದ್ದೆ ಕಳೆದ ಆರು ತಿಂಗಳಿಂದ. ಈಗ ಜೂನ್ ೧೫ ರಿಂದ ಪ್ಲೇ ಸ್ಕೂಲ್ಗೆ ಕಳುಹಿಸ್ತಾ ಇದ್ದೀನಿ. ಹೇಗೆ ಮಾಡಿದ್ರು ....."ನಾನು ದೊಡ್ಡ ಶಾಲೆಗೆ ಹೋಗೋಲ್ಲ" ಎನ್ನುತ್ತಾನೆ. ರಾತ್ರಿ ಕನಸಲ್ಲೂ ಕೂಡ. ಶುಕ್ರವಾರ ಕಳುಹಿಸಲಿಲ್ಲ ಆಗ ಬಂದ ಜ್ವರ ಇನ್ನು ಹೋಗಿಲ್ಲ. ನನಗೆ, ನನ್ನವರಿಗೆ ಬೆಳಗ್ಗೆ ೮ ಕ್ಕೆಲ್ಲಾ.. ಮನೆ ಬಿಡ ಬೇಕು. ೩.೪ ವರ್ಷ ಆಗಿದೆ. ಎಲ್ಲಾ ಹೇಳ್ತಾರೆ ಸರಿ ಆಗುತ್ತೆ ಎಂದು. ನನಗೂ ಒಂದೂ ತೋಚ್ತಾ ಇಲ್ಲ. ನಾಳೆ ಹೇಗಪ್ಪ ಎಂದಾಗಿದೆ.

ಕ್ಷಮಿಸಿ ಏನೇನೋ ಹೇಳ್ಕೊಂಡು ಬಿಟ್ಟೆ.

ಗೌತಮ್ ಹೆಗಡೆ said...

:)

Followers

About Me

My photo
ನನ್ನ ಬಗ್ಗೆ ಹೇಳಿಕೊಳ್ಳಲು ಏನು ಇಲ್ಲ ....... ನನ್ನೂರು ಕೊಡಗು...... ಹುಟ್ಟಿದ್ದು, ಬೆಳೆದದ್ದು...... ಸೇರಿದ್ದು......ಎಲ್ಲ ಇಲ್ಲಿಯೇ........ ಇನ್ನೇನು ಹೇಳಲಿ ............ ಇನ್ನು ನೀವೇ ಹೇಳ ಬೇಕು.......