Monday, May 4, 2009

ಸವಿ..... ಸವಿ..... ನೆನಪು......ಸಾವಿರ ನೆನಪು..........

ನನ್ನ ಅಮ್ಮನ ಮನೆ....... ದಟ್ಟ ಕಾಡಿನ ಒಳಗೆ......... 3 ಮೈಲು ನಡೆದು.....ಶಾಲೆಗೆ ಬರಬೇಕಿತ್ತು...ಅದೆಷ್ಟೋ ದೂರ ಒಂದು ಕಡೆ ಕಾಡು....ಒಂದು ಕಡೆ ಕಾಫಿ ತೋಟ..... ಆಮೇಲೆ...... ಎರಡೂ ಬದಿಯೂ ತೋಟ , ಬಸ್ಸು ಏನೂ ಇರಲಿಲ್ಲ....... ಎಲ್ಲೋ ವಾಹನಗಳು ಅಪರೂಪಕ್ಕೆ ಓಡಾಡಿದರೆ ಆಯಿತು ಇಲ್ಲಾಂದ್ರೆ ಇಲ್ಲ..... ಆಗ ನಮ್ಮೂರಲ್ಲಿ ಆಟೋನೆ ಇರಲಿಲ್ಲ.......

ಹೀಗಿರುವಾಗ ನಾವು ಆ ದಾರಿಯಲ್ಲೇ ನಡೆದೇ ......ಶಾಲೆ ಕಾಲೇಜು ಮುಗಿಸಿದೆವು...... ಆಗೆಲ್ಲ.... ನನಗೆ... ನನ್ನ ಜೀವದ ಬಗ್ಗೆ ನನಗೆ ನಂಬಿಕೆ ಇರಲಿಲ್ಲ.... ಆನೆಗಳು ಓಡಾಡುವ ದಾರಿ....... ನಿರ್ಜನ ಪ್ರದೇಶ...... ಅಬ್ಬಾ ಈಗ ನೆನೆಸಿದರೆ....ಎದೆ ಜಿಲ್ಲೆನೆಸುತ್ತೆ...!!!

ಅಕ್ಕ ಪಕ್ಕ ನನ್ನ ತಂದೆಯ ಅಣ್ಣಂದಿರ ಮೂರು ಮನೆ ಇತ್ತು.... ಇವರಲ್ಲಿ ಎರಡು ಮನೆಯವರು ಮಾತ್ರ ನಮ್ಮೊಡನೆ ಶಾಲಾ-ಕಾಲೇಜು ಮುಗಿಸಿದವರು. ಕಾಲೇಜು ಮೆಟ್ಟಿಲು ಹತ್ತಿದ ಮೇಲೆ........... ಕ್ಲಾಸ್ ಬೇರೆ ಬೇರೆ ಆಗಿ ಬರುವಾಗ ಒಬ್ಬೊಬ್ಬರೇ ಆಗಿ ಬಿಡುತ್ತಿದ್ದೆವು........ನಮಗೆ .... ಮಾರ್ಚ್ - ಏಪ್ರಿಲ್ ಬಿಟ್ಟರೆ.... ವರ್ಷ ಪೂರ್ತಿ ಮಳೆಗಾಲ....... ಒದ್ದೆ ಲಂಗದಲ್ಲಿ.... ತಲೆ ಮೇಲೆ ನೆಪ ಮಾತ್ರಕ್ಕೆ ಕೊಡೆ ಇಟ್ಟು ಕೊಂಡು ಹೊಳೆ ಆದ ದಾರಿಯಲ್ಲಿ ಕಾಲಿನಲ್ಲಿ ನೀರು ಚಿಮ್ಮಿಸುತ್ತಾ ನಡೆದು ಬರುತಿದ್ದರೆ.... ಸ್ವರ್ಗಕ್ಕೆ ಮೂರೇ ಗೇಣು ನಿಜಕ್ಕೂ .... ಈ ಎಲ್ಲ ಸಂತೋಷಕ್ಕೆ ಭಾಗಿ ಆದವಳು ನನ್ನ ದೊಡ್ಡಪ್ಪನ ಮಗಳು ವಾಣಿ…….


ನನ್ನ ದೊಡ್ಡಪ್ಪನ ಮಗಳು ವಾಣಿ ನನ್ನ ಓರಗೆಯವಳು......... ಒಂದು ವರ್ಷ ಕ್ಲಾಸಿನಲ್ಲಿ ಮುಂದೆ ಇದ್ದಳು .... ಅಷ್ಟೇ.... ನನ್ನ ಕಾಲೇಜು ಮುಗಿದ ನಂತರ 2 ವರ್ಷ ಬೆಂಗಳೂರಿನ ಒಂದು ಚಾರ್ಟೆಡ್ ಅಕೌ೦ಟೆಡ್ಆಫಿಸ್ ನಲ್ಲಿ ಉದ್ಯೋಗದಲ್ಲಿದ್ದೆ...ಅವಳೂ... ಬೆಂಗಳೂರಿನಲ್ಲೇ....ಉದ್ಯೋಗ ಮಾಡುತ್ತಿದ್ದರೂ ಇಬ್ಬರು ಪರಸ್ಪರ ಒಮ್ಮೆಯೂ ಭೇಟಿ ಮಾಡಿರಲಿಲ್ಲ.... ಆದರೆ... ನನಗೆ ಮದುವೆ ಗೊತ್ತಾದಾಗ ಓಡೋಡಿ ಬಂದಿದ್ದಳು ನನ್ನ ಇಂದಿರಾ ನಗರದ ಹಾಸ್ಟೆಲ್ಗೆ ....... ಒಂದು ಚೀಟಿಯೊಡನೆ........ ಅದನ್ನು ಈಗ ನಿಮಗಾಗಿ ನಿಮ್ಮ ಮುಂದೆ ಬಿಚ್ಚಿಡುತಿದ್ದೇನೆ................... ಏಪ್ರಿಲ್ 24 ಕ್ಕೆ ನಮ್ಮ ಮದುವೆ ಆಗಿ 4 ವರ್ಷ.... ಆ ಸವಿ ನೆನಪಲ್ಲಿ....ಓದಿ ಅಭಿಪ್ರಾಯಿಸುತ್ತೀರಲ್ಲ....

ವಸಂತ ಕಾಲ ಬಂದಾಗ.................

ನಿನ್ನೆ ಮೊನ್ನೆಯಂತಿದೆ, ಆ ದಿನಗಳು,
ಅಲ್ಲಲ್ಲ ಆ ಎರಡು ದಶಕಗಳು....
ಚಪ್ಪಲಿ ಹಾಕದ, ನೆನೆದ ಲಂಗದ...
ಹುಡುಗರು.... ನಾವಿನ್ನು ಶಾಲೆಯತ್ತ....
ನಡೆಯುತ್ತಿದ್ದ... ಆ ಅಭದ್ರ ಕಾಲವದು...

ಮಳೆ ಸುರಿಯುತ್ತಲಿರುತ್ತದೆ.....
ಅಗಾಗ ತನ್ನ ಕರ್ತವ್ಯವೆಂಬಂತೆ...
ಮಾವು ಚಿಗುರುಗಳು ಕೂಡ.....
ತಾನೇನು ಕಡಿಮೆ ಎನ್ನುತ್ತವೆ....
ಬಾಗಿದ ತೆನೆ ಎದೆಯುಬ್ಬಿಸಿ......ಸವಾಲೋಡ್ಡುತ್ತಾ...
ಈ ಕಾಲಚಕ್ರ ಸಾಗಿದೆ.... ಸಾಗುತಲಿದೆ...

ಎನಗೆ ಮತ್ತೆ ನೆನಪಾಗುತಿದೆ...
ಆ ದಿನಗಳು....ಹುಡುಕುತ್ತೇನೆ...
ಸುರಿವ ಮಳೆಯಲಿ... ಚಿಗುರು ಮಾವಲಿ.....
ತಲೆಬಾಗಿದ ತೆನೆಯಲಿ......

ಊಹೂಂ ತಲೆಯಾದಿಸುತ್ತವೆ ಅವು.,
ಮತ್ತೆ ಬಾರವೂ.. ಆ ದಿನಗಳು....
ವರ್ತಮಾನದಲ್ಲಿ ಭೂತವರಸ ಬೇಡ
ವ್ಯರ್ಥ ಮಾನವ... ನಡೆ ಮುಂದೇ ನೀ....

ಚಕ್ರವದೇ ತಿರುಗಲಿದೆ... ನಾವು.,
ಬಂದಾಗೆಲ್ಲ... ಕಪ್ಪು ಕಾಫಿ...
ಭೀಡೆ.. ನಗು, ಊಟ ಹೊಟ್ಟೆಗೆ....
ಇರಲಿರಲಿ.... ನಾವಿದ್ದೇವೆ...ಒಡ್ಡೋಲಗದ
ನಿರೇಕ್ಷೆಯಲಿ....ತಯಾರಗುತ್ತಿರುವೆ.....ತಾನೇ....
ನೀ ನಸು ನಾಚಿಕೆಯಲಿ......?

8 comments:

ಶಿವಪ್ರಕಾಶ್ said...

ನಿಮ್ಮ ಸವಿ ಸವಿ ನೆನಪು ತುಂಬಾ ಚನ್ನಾಗಿದೆ.. ಅದರಲ್ಲೂ ಮಳೇಲಿ ನೆನಯೋದು ಅಂದ್ರೆ ತುಂಬಾ ಚನ್ನಾಗಿರುತ್ತೆ........
ನಿಮ್ಮ ಗೆಳತಿಯ ಕವನ ಕೂಡ ತುಂಬಾ ಚನ್ನಾಗಿದೆ..
ಮುದುವೆ ವಾರ್ಷಿಕೋತ್ಸವದ ಶುಭಾಶಯಗಳು...
ಚಿರಕಾಲ ಸುಖ ಸಂತೋಷದಿಂದ ಬಾಳಿ..

Naveen_an_INDIAN said...

savi savi nenapu sada chirayuvagirali...

ಸಿಮೆಂಟು ಮರಳಿನ ಮಧ್ಯೆ said...

ಕ್ರಪಾ....

ನನಗೆ ನಿಮ್ಮ ಬ್ಲಾಗ್ ಗೇ ಬರಲೇ ಆಗಲಿಲ್ಲ....
ದಯವಿಟ್ಟು ಕ್ಷಮಿಸಿ....

ಎಷ್ಟು ಚಂದದ ಕವಿತೆ...!!

ಪ್ರತಿಯೊಂದು ಪದಗಳಲ್ಲಿ
ಭಾವಗಳು
ತುಳುಕುತ್ತಿವೆ...

ಬಹಳ ಬಹಳ
ಇಷ್ಟವಾದವು....

ನಾನು ಆಗತಾನೆ ಬರೆಯಲು ಶುರುಮಾಡಿದಾಗ
ನನ್ನ ಬ್ಲಾಗಿನ ಲೇಖನಗಳನ್ನು ಸಿನೇಮಾ ಮಾಡಿದರೆ ಹೇಗೆ ಎಂದು...
ಅದಕ್ಕೆ ತಕ್ಕ ಪಾತ್ರಗಳಿಗೆ
ನಟ, ನಟಿಯರನ್ನು...
ಸೂಚಿಸಿ...

ನನ್ನನ್ನು ಹುರಿದುಂಬಿಸಿದ

ನಿಮ್ಮ ಪ್ರತಿಕ್ರಿಯೆಗಳು..
ನನ್ನಲ್ಲಿ ಯಾವಾಗಲೂ ಹಸಿರಾಗಿವೆ...
ಹಸಿರಾಗಿಯೇ ಇರುತ್ತವೆ....

ಆಗಾಗಲಾದರೂ...
ನನ್ನ ಬ್ಲಾಗಿಗೆ ಬರುತ್ತಿರಿ....

ಪ್ರೀತಿಯಿಂದ....

ಇಟ್ಟಿಗೆ ಸಿಮೆಂಟು..

ಕೃಪಾ said...

ಧನ್ಯವಾದಗಳು.....ಶಿವೂ...
ನಿಮ್ಮ ಹಾರೈಕೆಗೆ.......
ನನ್ನ ಸವಿ ನೆನಪನ್ನು
ಸವಿದದ್ದಕ್ಕೆ.....
ನಿಮ್ಮ ಹುಡುಗಿ ಮತ್ತೆ ಸಿಕ್ಕಳೆ ?

ಕೃಪಾ said...

Thank you naveenji.....

ಕೃಪಾ said...

ನಮಸ್ತೆ ಪ್ರಕಾಶ್ ಅವರೇ....

ನನ್ನ ಮನೆ, ಮಗು,ಆಫೀಸ್ ಇವುಗಳಿಗೆಲ್ಲ ನ್ಯಾಯ ಒದಗಿಸುತ್ತಾ... ಬ್ಲಾಗ್ ಲೋಕಕ್ಕೆ ಬರಲು.... ಅಲ್ಲೆಲ್ಲ ಸುತ್ತಾಡಲು ಒಮ್ಮೊಮ್ಮೆ ಸಮಯದ ತೊಡುಕು. ನಿಮ್ಮಗಳ ಪ್ರೋತ್ಸಾಹದ ಮಾತು ಮತ್ತೂ ಬರೆಸುತ್ತೆ. ನೀವು ಬ್ಲಾಗ್ ಲೋಕದಲ್ಲಿ ಬೆಳೆದಿದ್ದು... ನಿಜಕ್ಕೂ ಒಂದು ಸಾಧನೆ. ನಗಲು ಇಟ್ಟಿಗೆ ಸಿಮೆಂಟ್ ಗೆ ಬರ್ತೀನಿ ನಾನು.

ಶಿವಪ್ರಕಾಶ್ said...

ನನ್ನ ಹುಡುಗಿನಾ ?
ಒಹ್... ಸ್ನೇಹನಾ ?...
ಅವಳು ಈ ಜನ್ಮದಲ್ಲಿ ಸಿಗೋಲ್ಲ ಬಿಡಿ....
ಬಿಟ್ಬಿಟ್ಟೆ ಕಣ್ರೀ... ಅವಳನ್ನು ಪಟಾಯಿಸಿ ಲೋಫರ್ ಅನ್ಸ್ಕೋಳೋದಕಿಂತ ........... "ಮುಂಗಾರು ಮಳೆ ಡೈಲಾಗ್"...... :P

ಗೌತಮ್ ಹೆಗಡೆ said...

:)

Followers

About Me

My photo
ನನ್ನ ಬಗ್ಗೆ ಹೇಳಿಕೊಳ್ಳಲು ಏನು ಇಲ್ಲ ....... ನನ್ನೂರು ಕೊಡಗು...... ಹುಟ್ಟಿದ್ದು, ಬೆಳೆದದ್ದು...... ಸೇರಿದ್ದು......ಎಲ್ಲ ಇಲ್ಲಿಯೇ........ ಇನ್ನೇನು ಹೇಳಲಿ ............ ಇನ್ನು ನೀವೇ ಹೇಳ ಬೇಕು.......