Thursday, April 30, 2009

ಅಮ್ಮ

ನನ್ನ ಅಮ್ಮ

ನನ್ನ ಅಮ್ಮನೂ ಸುಂದರಿ......
ತೊಳೆದ ಮುತ್ತಿನ ಲಹರಿ
ಒಂದು ಕಾಲದಲ್ಲಿ...!!!

ಮುದ್ದುಕ್ಕುವ ಹಾಲ್ಗೆನ್ನೆ
ಮುಗ್ದತೆ ಸೂಸುವ ಚಿಹ್ನೆ
ಹಳೆ ಭಾವ ಚಿತ್ರದಲ್ಲಿ...!!!

ನನ್ನಮ್ಮ ಒಲವಿನಿಂದ ....
ಕನಸುಗಳ ಲೋಕದಿಂದ
ಧುಮುಕ್ಕಿದ್ದು ಸಂಸಾರ ಕೂಪದಲ್ಲಿ..!!!

ಕಟ್ಟಿದ ಕನಸುಗಳ ಬುತ್ತಿ
ಒತ್ತೊಟ್ಟಿಗಿಟ್ಟು... ಟೊಂಕಕಟ್ಟಿ
ನಿಂತಿದ್ದು ಸಂಸಾರ ದಾಳದಲ್ಲಿ..!!!

ಕಷ್ಟ ಕೋಟಲೆಗಳ ಜಂಜಾಟದಲ್ಲಿ
ನೊಂದು, ನಲುಗಿ ಬಾಳಿನಲ್ಲಿ
ಈಗ ಒಣ ಹೂವಿನ ಮಲ್ಲಿ..!!!

ನೆರಿ ಬಿದ್ದ ಹಣೆ.. ಮರೆಯಾದ ಯೌವ್ವನ,
ಗುಳಿಬಿದ್ದ ಕಣ್ಣು, ಸುಣ್ಣದ ಮೈಮನ
ಬದಲಾದ ಉರುಳು ಚಕ್ರದಲ್ಲಿ !!!

4 comments:

ಮಲ್ಲಿಕಾರ್ಜುನ.ಡಿ.ಜಿ. said...

ಕೃಪಾ,
ನೀವು ಬರೆದಿರುವುದು ಎಲ್ಲ ಅಮ್ಮಂದಿರಿಗೂ ಅನ್ವಯಿಸುತ್ತೆ. ಅಮ್ಮನೇ ಹಾಗೆ ಅಲ್ವಾ? ತುಂಬಾ ಚೆನ್ನಾಗಿದೆ. ಹೀಗೇ ಬರೆಯುತ್ತಿರಿ.

ಮನಸು said...

tumba tumba chennagide ammane chenna hegiddaru amma ammane...

dhanyavadagalu heege bareyuttaliri

ಧರಿತ್ರಿ said...

ಅಮ್ಮನ ಬಗ್ಗೆ ಎಷ್ಟು ಬರೆದರೂ, ಎಷ್ಟು ಹೇಳಿದ್ರೂನು ಕಡಿಮೆನೇ. ಅಮ್ಮ ಸುಂದರ, ಅಮ್ಮ ಸತ್ಯ, ಅಮ್ಮ ನಿತ್ಯ, ಅಮ್ಮ ಜೀವನ....ಎಲ್ಲನೂ. ಕವನ ಓದಿ ಖುಷಿಗೊಂಡೆ
-ಧರಿತ್ರಿ

ಗೌತಮ್ ಹೆಗಡೆ said...

:):)

Followers

About Me

My photo
ನನ್ನ ಬಗ್ಗೆ ಹೇಳಿಕೊಳ್ಳಲು ಏನು ಇಲ್ಲ ....... ನನ್ನೂರು ಕೊಡಗು...... ಹುಟ್ಟಿದ್ದು, ಬೆಳೆದದ್ದು...... ಸೇರಿದ್ದು......ಎಲ್ಲ ಇಲ್ಲಿಯೇ........ ಇನ್ನೇನು ಹೇಳಲಿ ............ ಇನ್ನು ನೀವೇ ಹೇಳ ಬೇಕು.......